Surah 1 · 7 verses · Abdussalam Puthige

Surah Al-Fatihah in Kannada

In English with tafsir
1:1

بِسۡمِ ٱللَّهِ ٱلرَّحۡمَٰنِ ٱلرَّحِيمِ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ

1:2

ٱلۡحَمۡدُ لِلَّهِ رَبِّ ٱلۡعَٰلَمِينَ

ಪ್ರಶಂಸೆಗಳೆಲ್ಲಾ ಎಲ್ಲ ಲೋಕಗಳ ಒಡೆಯನಾದ ಅಲ್ಲಾಹನಿಗೆ

1:3

ٱلرَّحۡمَٰنِ ٱلرَّحِيمِ

ಅವನು ಅಪಾರ ದಯಾಳು, ಕರುಣಾಮಯಿ

1:4

مَٰلِكِ يَوۡمِ ٱلدِّينِ

ಪ್ರತಿಫಲದ ದಿನದ ಮಾಲಕ

1:5

إِيَّاكَ نَعۡبُدُ وَإِيَّاكَ نَسۡتَعِينُ

(ಓ ಅಲ್ಲಾಹ್) ನಾವು ನಿನ್ನನ್ನು ಮಾತ್ರ ಪೂಜಿಸುತ್ತೇವೆ ಮತ್ತು ನಿನ್ನಿಂದ ಮಾತ್ರ ನೆರವನ್ನು ಬೇಡುತ್ತೇವೆ

1:6

ٱهۡدِنَا ٱلصِّرَٰطَ ٱلۡمُسۡتَقِيمَ

ನಮ್ಮನ್ನು ನೇರ ಮಾರ್ಗದಲ್ಲಿ ನಡೆಸು

1:7

صِرَٰطَ ٱلَّذِينَ أَنۡعَمۡتَ عَلَيۡهِمۡ غَيۡرِ ٱلۡمَغۡضُوبِ عَلَيۡهِمۡ وَلَا ٱلضَّآلِّينَ

ನೀನು ಬಹುಮಾನಿಸಿದವರ ಮಾರ್ಗದಲ್ಲಿ (ನಡೆಸು); ನಿನ್ನ ಕೋಪಕ್ಕೆ ತುತ್ತಾದವರ ಮತ್ತು ದಾರಿ ತಪ್ಪಿದವರ ಮಾರ್ಗದಲ್ಲಿ ಅಲ್ಲ

Translation: Abdussalam Puthige.