بِسۡمِ ٱللَّهِ ٱلرَّحۡمَٰنِ ٱلرَّحِيمِ
90:1لَآ أُقۡسِمُ بِهَٰذَا ٱلۡبَلَدِ
ಇಲ್ಲ, ನಾನು ಈ ನಗರದ ಆಣೆ ಹಾಕುತ್ತೇನೆ
90:2وَأَنتَ حِلُّۢ بِهَٰذَا ٱلۡبَلَدِ
ನೀವು ಇದೇ ನಗರದಲ್ಲಿ ಇರುವವರು
90:3وَوَالِدٍ وَمَا وَلَدَ
ತಂದೆಯ (ಆದಮರ) ಮತ್ತು ಅವರ ಸಂತತಿಯ ಆಣೆ
90:4لَقَدۡ خَلَقۡنَا ٱلۡإِنسَٰنَ فِي كَبَدٍ
ನಾವು ಮನುಷ್ಯನನ್ನು ಇಕ್ಕಟ್ಟಿನಲ್ಲಿರುವವನಾಗಿ ಸೃಷ್ಟಿಸಿದ್ದೇವೆ
90:5أَيَحۡسَبُ أَن لَّن يَقۡدِرَ عَلَيۡهِ أَحَدٌ
ತನ್ನ ಮೇಲೆ ಯಾರಿಗೂ ನಿಯಂತ್ರಣವಿಲ್ಲವೆಂದು ಅವನು ಭಾವಿಸಿದ್ದಾನೆಯೇ
90:6يَقُولُ أَهۡلَكۡتُ مَالًا لُّبَدًا
ನಾನು ಬಹಳಷ್ಟು ಸಂಪತ್ತನ್ನು ವ್ಯರ್ಥಗೊಳಿಸಿದ್ದೇನೆ ಎಂದವನು ಹೇಳುತ್ತಾನೆ
90:7أَيَحۡسَبُ أَن لَّمۡ يَرَهُۥٓ أَحَدٌ
ಅವನೇನು, ತನ್ನನ್ನು ಯಾರೂ ನೋಡಿಲ್ಲವೆಂದು ಭಾವಿಸಿದ್ದಾನೆಯೇ
90:8أَلَمۡ نَجۡعَل لَّهُۥ عَيۡنَيۡنِ
ನಾವೇನು ಅವನಿಗೆ ಎರಡು ಕಣ್ಣುಗಳನ್ನು ನೀಡಿಲ್ಲವೇ
90:9وَلِسَانًا وَشَفَتَيۡنِ
ನಾಲಿಗೆ ಹಾಗೂ ಎರಡು ತುಟಿಗಳನ್ನು ನೀಡಿಲ್ಲವೇ
90:10وَهَدَيۡنَٰهُ ٱلنَّجۡدَيۡنِ
ಮತ್ತು ಅವನಿಗೆ ಎರಡು ದಾರಿಗಳನ್ನು ತೋರಿಸಿಲ್ಲವೇ
90:11فَلَا ٱقۡتَحَمَ ٱلۡعَقَبَةَ
ಆದರೆ ಅವನು ಏರು ಹಾದಿಯನ್ನು ಕ್ರಮಿಸಲು ನಿರಾಕರಿಸಿದನು
90:12وَمَآ أَدۡرَىٰكَ مَا ٱلۡعَقَبَةُ
ನಿಮಗೇನು ಗೊತ್ತು ಆ ಏರು ಹಾದಿ ಏನೆಂದು
90:13فَكُّ رَقَبَةٍ
(ದಾಸ್ಯದಲ್ಲಿರುವವರ) ಕೊರಳನ್ನು ಬಿಡಿಸುವುದು
90:14أَوۡ إِطۡعَٰمٌ فِي يَوۡمٍ ذِي مَسۡغَبَةٍ
ಅಥವಾ ಹಸಿವಿನ ದಿನ ಉಣಿಸುವುದು
90:15يَتِيمًا ذَا مَقۡرَبَةٍ
ಸಂಬಂಧಿಕನಾಗಿರುವ ಅನಾಥನನ್ನು ಪೋಷಿಸುವುದು
90:16أَوۡ مِسۡكِينًا ذَا مَتۡرَبَةٍ
ಸಂಕಷ್ಟದಲ್ಲಿರುವ ಬಡವನಿಗೆ ನೆರವಾಗುವುದು
90:17ثُمَّ كَانَ مِنَ ٱلَّذِينَ ءَامَنُواْ وَتَوَاصَوۡاْ بِٱلصَّبۡرِ وَتَوَاصَوۡاْ بِٱلۡمَرۡحَمَةِ
(ಇದನ್ನು ಮಾಡಿದವನು) ವಿಶ್ವಾಸಿಗಳ, ಪರಸ್ಪರ ಸಹನೆಯನ್ನು ಬೋಧಿಸುವವರ ಹಾಗೂ ಪರಸ್ಪರ ಕರುಣೆಯನ್ನು ಬೋಧಿಸುವವರ ಸಾಲಿಗೆ ಸೇರಿರಬೇಕು
90:18أُوْلَٰٓئِكَ أَصۡحَٰبُ ٱلۡمَيۡمَنَةِ
ಅವರೇ ಬಲ ಭಾಗದವರು (ಸೌಭಾಗ್ಯವಂತರು)
90:19وَٱلَّذِينَ كَفَرُواْ بِـَٔايَٰتِنَا هُمۡ أَصۡحَٰبُ ٱلۡمَشۡـَٔمَةِ
ಇನ್ನು, ನಮ್ಮ ವಚನಗಳನ್ನು ಧಿಕ್ಕರಿಸಿದವರೇ ಎಡಭಾಗದವರು (ಭಾಗ್ಯಹೀನರು)
90:20عَلَيۡهِمۡ نَارٌ مُّؤۡصَدَةُۢ
ಅವರನ್ನು ನರಕಾಗ್ನಿಯಲ್ಲಿ ಮುಚ್ಚಿ ಬಿಡಲಾಗುವುದು
Translation: Abdussalam Puthige.