Surah 73 · 20 verses · Abdussalam Puthige
Surah Al-Muzzammil in Kannada
بِسۡمِ ٱللَّهِ ٱلرَّحۡمَٰنِ ٱلرَّحِيمِ
نِّصۡفَهُۥٓ أَوِ ٱنقُصۡ مِنۡهُ قَلِيلًا
ಅದರ (ರಾತ್ರಿಯ) ಅರ್ಧ ಭಾಗವನ್ನು ಅಥವಾ ಅದನ್ನು ತುಸು ಕಡಿತ ಗೊಳಿಸಿ (ಅದಕ್ಕಿಂತ ತುಸು ಕಡಿಮೆ ಭಾಗವನ್ನು) –
أَوۡ زِدۡ عَلَيۡهِ وَرَتِّلِ ٱلۡقُرۡءَانَ تَرۡتِيلًا
– ಅಥವಾ ಅದನ್ನು ಸ್ವಲ್ಪ ಹೆಚ್ಚಿಸಿಕೊಂಡು, (ನಮಾಝ್‌ನಲ್ಲಿ) ಕುರ್‌ಆನನ್ನು ನೆಮ್ಮದಿಯಿಂದ, ಕ್ರಮಬದ್ಧವಾಗಿ ಓದಿರಿ
إِنَّ نَاشِئَةَ ٱلَّيۡلِ هِيَ أَشَدُّ وَطۡـًٔا وَأَقۡوَمُ قِيلًا
ರಾತ್ರಿಯ ವೇಳೆ (ಆರಾಧನೆಗಾಗಿ ನಡೆಸುವ) ಜಾಗರಣೆಯು ಖಂಡಿತ ಚಿತ್ತಕ್ಕೆ ಸ್ಥಿರತೆಯನ್ನೊದಗಿಸುತ್ತದೆ ಮತ್ತು ಮಾತನ್ನು ಪರಿಣಾಮಕಾರಿಯಾಗಿಸುತ್ತದೆ
وَٱذۡكُرِ ٱسۡمَ رَبِّكَ وَتَبَتَّلۡ إِلَيۡهِ تَبۡتِيلًا
ನೀವು ನಿಮ್ಮ ಒಡೆಯನ ನಾಮವನ್ನು ಸ್ಮರಿಸಿರಿ ಮತ್ತು (ಇತರ) ಎಲ್ಲರನ್ನೂ ತೊರೆದು ಅವನಲ್ಲಿ ಒಲವು ತೋರಿರಿ
رَّبُّ ٱلۡمَشۡرِقِ وَٱلۡمَغۡرِبِ لَآ إِلَٰهَ إِلَّا هُوَ فَٱتَّخِذۡهُ وَكِيلًا
ಅವನೇ ಪೂರ್ವ ಮತ್ತು ಪಶ್ಚಿಮಗಳ ಒಡೆಯನು. ಅವನ ಹೊರತು ಬೇರೆ ದೇವರಿಲ್ಲ. ಕಾರ್ಯಸಾಧಕನಾಗಿ ನೀವು ಅವನನ್ನೇ ನೆಚ್ಚಿಕೊಳ್ಳಿರಿ
وَٱصۡبِرۡ عَلَىٰ مَا يَقُولُونَ وَٱهۡجُرۡهُمۡ هَجۡرًا جَمِيلًا
ಅವರಾಡುವ ಮಾತುಗಳ ವಿಷಯದಲ್ಲಿ ಸಂಯಮ ಪಾಲಿಸಿರಿ. ಮತ್ತು ಅತ್ಯುತ್ತಮ ರೀತಿಯಲ್ಲಿ ಅವರಿಂದ ಬೇರ್ಪಡಿರಿ
وَذَرۡنِي وَٱلۡمُكَذِّبِينَ أُوْلِي ٱلنَّعۡمَةِ وَمَهِّلۡهُمۡ قَلِيلًا
ಬಿಟ್ಟು ಬಿಡಿರಿ ನನ್ನನ್ನು, ಮತ್ತು ಸತ್ಯವನ್ನು ತಿರಸ್ಕರಿಸುವ ಸ್ಥಿತಿವಂತರನ್ನು. (ಅವರನ್ನು ನಾನು ನೋಡಿಕೊಳ್ಳುವೆನು). ಮತ್ತು ಅವರಿಗೆ ಇನ್ನಷ್ಟು ಕಾಲಾವಕಾಶ ನೀಡಿರಿ
يَوۡمَ تَرۡجُفُ ٱلۡأَرۡضُ وَٱلۡجِبَالُ وَكَانَتِ ٱلۡجِبَالُ كَثِيبًا مَّهِيلًا
ಭೂಮಿ ಮತ್ತು ಪರ್ವತಗಳು ನಡುಗಲಾರಂಭಿಸುವ ಆ ದಿನ, ಪರ್ವತಗಳು ಕೇವಲ ಮರಳ ರಾಶಿಗಳಂತಾಗಿ ಬಿಡುವವು
إِنَّآ أَرۡسَلۡنَآ إِلَيۡكُمۡ رَسُولًا شَٰهِدًا عَلَيۡكُمۡ كَمَآ أَرۡسَلۡنَآ إِلَىٰ فِرۡعَوۡنَ رَسُولًا
(ಜನರೇ,) ನಾವು ಫಿರ್‌ಔನನ ಕಡೆಗೆ ದೂತರನ್ನು ಕಳುಹಿಸಿದಂತೆ ನಿಮ್ಮ ಕಡೆಗೆ ದೂತರನ್ನು ಕಳುಹಿಸಿರುವೆವು. ಅವರು ನಿಮ್ಮ ವಿಷಯದಲ್ಲಿ ಸಾಕ್ಷಿಯಾಗುವರು
فَعَصَىٰ فِرۡعَوۡنُ ٱلرَّسُولَ فَأَخَذۡنَٰهُ أَخۡذًا وَبِيلًا
ಫಿರ್‌ಔನನು ದೇವದೂತರಿಗೆ ಅವಿಧೇಯತೆ ತೋರಿದಾಗ ನಾವು ಅವನನ್ನು ಹಿಡಿದೆವು ಮತ್ತು ಭಾರೀ ಸಂಕಟಕ್ಕೆ ಸಿಲಕಿಸಿದೆವು
فَكَيۡفَ تَتَّقُونَ إِن كَفَرۡتُمۡ يَوۡمًا يَجۡعَلُ ٱلۡوِلۡدَٰنَ شِيبًا
ನೀವು ಧಿಕ್ಕರಿಸಿದರೆ, ಮಕ್ಕಳನ್ನು ವೃದ್ಧರಾಗಿಸುವ ಆ ದಿನ, ನೀವು ಹೇಗೆ ತಾನೇ ಸುರಕ್ಷಿತರಾಗಿ ಉಳಿಯುವಿರಿ
ٱلسَّمَآءُ مُنفَطِرُۢ بِهِۦۚ كَانَ وَعۡدُهُۥ مَفۡعُولًا
ಅಂದು ಆಕಾಶವು ಬಿರಿದು ಬೀಳಲಿದೆ. ಇದು ಅವನ (ಅಲ್ಲಾಹನ) ವಾಗ್ದಾನ. ಇದು ಈಡೇರುವುದು ಖಚಿತ
إِنَّ هَٰذِهِۦ تَذۡكِرَةٌۖ فَمَن شَآءَ ٱتَّخَذَ إِلَىٰ رَبِّهِۦ سَبِيلًا
ಇದು (ಕುರ್‌ಆನ್) ಒಂದು ಉಪದೇಶ. ಇಷ್ಟ ಉಳ್ಳವನು ತನ್ನ ಒಡೆಯನ ಕಡೆಗಿರುವ ದಾರಿಯನ್ನು ಅನುಸರಿಸಲಿ
إِنَّ رَبَّكَ يَعۡلَمُ أَنَّكَ تَقُومُ أَدۡنَىٰ مِن ثُلُثَيِ ٱلَّيۡلِ وَنِصۡفَهُۥ وَثُلُثَهُۥ وَطَآئِفَةٌ مِّنَ ٱلَّذِينَ مَعَكَۚ وَٱللَّهُ يُقَدِّرُ ٱلَّيۡلَ وَٱلنَّهَارَۚ عَلِمَ أَن لَّن تُحۡصُوهُ فَتَابَ عَلَيۡكُمۡۖ فَٱقۡرَءُواْ مَا تَيَسَّرَ مِنَ ٱلۡقُرۡءَانِۚ عَلِمَ أَن سَيَكُونُ مِنكُم مَّرۡضَىٰ وَءَاخَرُونَ يَضۡرِبُونَ فِي ٱلۡأَرۡضِ يَبۡتَغُونَ مِن فَضۡلِ ٱللَّهِ وَءَاخَرُونَ يُقَٰتِلُونَ فِي سَبِيلِ ٱللَّهِۖ فَٱقۡرَءُواْ مَا تَيَسَّرَ مِنۡهُۚ وَأَقِيمُواْ ٱلصَّلَوٰةَ وَءَاتُواْ ٱلزَّكَوٰةَ وَأَقۡرِضُواْ ٱللَّهَ قَرۡضًا حَسَنًاۚ وَمَا تُقَدِّمُواْ لِأَنفُسِكُم مِّنۡ خَيۡرٍ تَجِدُوهُ عِندَ ٱللَّهِ هُوَ خَيۡرًا وَأَعۡظَمَ أَجۡرًاۚ وَٱسۡتَغۡفِرُواْ ٱللَّهَۖ إِنَّ ٱللَّهَ غَفُورٌ رَّحِيمُۢ
ನಿಮ್ಮ ಒಡೆಯನಿಗೆ ಖಂಡಿತ ತಿಳಿದಿದೆ; ನೀವು ಮತ್ತು ನಿಮ್ಮ ಜೊತೆಗಿರುವ ಕೆಲವರು, ಕೆಲವೊಮ್ಮೆ ರಾತ್ರಿಯ ಸುಮಾರು ಮೂರನೇ ಎರಡು ಭಾಗವನ್ನು, ಇನ್ನು ಕೆಲವೊಮ್ಮೆ ಅರ್ಧ ಭಾಗವನ್ನು ಮತ್ತೆ ಕೆಲವೊಮ್ಮೆ ಮೂರನೇ ಒಂದು ಭಾಗವನ್ನು (ನಮಾಝ್‌ನಲ್ಲಿ) ನಿಂತುಕೊಂಡು ಕಳೆಯುತ್ತೀರಿ. ಅಲ್ಲಾಹನೇ ರಾತ್ರಿ ಮತ್ತು ಹಗಲನ್ನು ರೂಪಿಸಿದವನು. ಅದನ್ನು (ಈ ಆದೇಶವನ್ನು) ಬಹುಕಾಲ ಪಾಲಿಸಲು ನಿಮಗೆ ಸಾಧ್ಯವಾಗದೆಂಬುದು ಅವನಿಗೆ ತಿಳಿದಿದೆ. ಆದ್ದರಿಂದ ಅವನು ನಿಮ್ಮ ಮೇಲೆ ದಯೆ ತೋರಿರುವನು. ನೀವಿನ್ನು ಕುರ್‌ಆನ್‌ನಿಂದ, ಸುಲಭವಾಗಿ ಓದಲು ಸಾಧ್ಯವಾಗುವಷ್ಟನ್ನು ಓದಿರಿ. ನಿಮ್ಮಲ್ಲಿ ಕೆಲವರು ರೋಗಿಗಳಿದ್ದಾರೆ, ಇನ್ನು ಕೆಲವರು ಅಲ್ಲಾಹನ ಅನುಗ್ರಹವನ್ನರಸುತ್ತಾ ಭೂಮಿಯಲ್ಲಿ ಸಂಚರಿಸುತ್ತಿರುತ್ತಾರೆ ಮತ್ತು ಕೆಲವರು ಅಲ್ಲಾಹನ ಮಾರ್ಗದಲ್ಲಿ ಹೋರಾಟನಿರತರಾಗಿರುತ್ತಾರೆ. ಆದ್ದರಿಂದ ನೀವು, ಅದರಿಂದ (ಕುರ್‌ಆನಿನಿಂದ) ಸುಲಭವಾಗಿ ಓದಬಹುದಾದಷ್ಟನ್ನು ಓದಿರಿ ಹಾಗೂ ನಮಾಝನ್ನು ಪಾಲಿಸಿರಿ, ಝಕಾತನ್ನು ಪಾವತಿಸಿರಿ. ಮತ್ತು ಅಲ್ಲಾಹನಿಗೆ ಸತ್ಕರ್ಮಗಳ ಸಾಲವನ್ನು ನೀಡಿರಿ. ನೀವು ನಿಮಗಾಗಿ ಮುಂದೆ ಕಳುಹಿಸಿರುವ ಪ್ರತಿಯೊಂದು ಸತ್ಕರ್ಮವನ್ನು ಅಲ್ಲಾಹನ ಬಳಿ ಕಾಣುವಿರಿ. ಆಗ ಅದು ಇನ್ನಷ್ಟು ಉತ್ತಮ ರೂಪದಲ್ಲಿರುವುದು ಮತ್ತು ಭಾರೀ ಪ್ರತಿಫಲದಾಯಕವಾಗಿರುವುದು. ಅಲ್ಲಾಹನಲ್ಲಿ ಕ್ಷಮೆಯಾಚಿಸಿರಿ. ಅಲ್ಲಾಹನು ಖಂಡಿತ ಕ್ಷಮಿಸುವವನೂ ಕರುಣಾಮಯಿಯೂ ಆಗಿರುತ್ತಾನೆ
Translation: Abdussalam Puthige.