بِسۡمِ ٱللَّهِ ٱلرَّحۡمَٰنِ ٱلرَّحِيمِ
96:1ٱقۡرَأۡ بِٱسۡمِ رَبِّكَ ٱلَّذِي خَلَقَ
ಓದಿರಿ, (ವಿಶ್ವವನ್ನು) ಸೃಷ್ಟಿಸಿದ ನಿಮ್ಮೊಡೆಯನ ಹೆಸರಿಂದ
96:2خَلَقَ ٱلۡإِنسَٰنَ مِنۡ عَلَقٍ
ಅವನು ಮನುಷ್ಯನನ್ನು ಹೆಪ್ಪು ಗಟ್ಟಿದ ರಕ್ತದಿಂದ ಸೃಷ್ಟಿಸಿರುವನು
96:3ٱقۡرَأۡ وَرَبُّكَ ٱلۡأَكۡرَمُ
ಓದಿರಿ. ಮಹಾ ಉದಾರಿಯಾದ ನಿಮ್ಮೊಡೆಯನ ಹೆಸರಿಂದ
96:4ٱلَّذِي عَلَّمَ بِٱلۡقَلَمِ
ಅವನು ಲೇಖನಿಯ ಮೂಲಕ ಕಲಿಸಿದನು
96:5عَلَّمَ ٱلۡإِنسَٰنَ مَا لَمۡ يَعۡلَمۡ
ಮತ್ತು ಮಾನವನಿಗೆ ತಿಳಿದಿಲ್ಲದ್ದನ್ನು ಕಲಿಸಿದನು
96:6كـَلَّآ إِنَّ ٱلۡإِنسَٰنَ لَيَطۡغَىٰٓ
ಆದರೆ ಮನುಷ್ಯನು ಮಾತ್ರ ವಿದ್ರೋಹವೆಸಗುತ್ತಾನೆ
96:7أَن رَّءَاهُ ٱسۡتَغۡنَىٰٓ
ಅವನು ತನ್ನನ್ನು ತೀರಾ ಸ್ವತಂತ್ರನಾಗಿ ಕಾಣುತ್ತಾನೆ
96:8إِنَّ إِلَىٰ رَبِّكَ ٱلرُّجۡعَىٰٓ
ಖಂಡಿತ (ಎಲ್ಲರೂ) ನಿಮ್ಮ ಒಡೆಯನ ಕಡೆಗೇ ಮರಳ ಬೇಕಾಗಿದೆ
96:9أَرَءَيۡتَ ٱلَّذِي يَنۡهَىٰ
ನೀವು ನೋಡಿದಿರಾ, ತಡೆಯುವವನನ್ನು
96:10عَبۡدًا إِذَا صَلَّىٰٓ
(ನಮ್ಮ) ದಾಸನು ನಮಾಝ್ ಸಲ್ಲಿಸುವಾಗ (ತಡೆಯುವವನನ್ನು)
96:11أَرَءَيۡتَ إِن كَانَ عَلَى ٱلۡهُدَىٰٓ
ನೀವು ನೋಡಿದಿರಾ? ಒಂದು ವೇಳೆ ಅವನು ಸರಿದಾರಿಯಲ್ಲಿದ್ದರೆ
96:12أَوۡ أَمَرَ بِٱلتَّقۡوَىٰٓ
ಅಥವಾ ಅವನು ಸತ್ಯನಿಷ್ಠೆಯನ್ನು ಬೋಧಿಸಿದ್ದರೆ (ಅವನನ್ನು ತಡೆದವನ ಗತಿ ಏನಾದೀತು)
96:13أَرَءَيۡتَ إِن كَذَّبَ وَتَوَلَّىٰٓ
ನೀವು ನೋಡಿದಿರಾ? ಅವನು (ತಡೆಯುವವನು, ಸತ್ಯವನ್ನು) ತಿರಸ್ಕರಿಸುವವನು ಹಾಗೂ ಕಡೆಗಣಿಸುವವನಾಗಿದ್ದರೆ (ಅವನ ಗತಿ ಏನಾದೀತು)
96:14أَلَمۡ يَعۡلَم بِأَنَّ ٱللَّهَ يَرَىٰ
ಅಲ್ಲಾಹನು ನೋಡುತ್ತಿರುವನೆಂದು ಅವನಿಗೆ ತಿಳಿಯದೇ
96:15كـَلَّا لَئِن لَّمۡ يَنتَهِ لَنَسۡفَعَۢا بِٱلنَّاصِيَةِ
ಒಂದು ವೇಳೆ ಅವನು ತನ್ನನ್ನು ತಡೆಯದಿದ್ದರೆ, ನಾವು ಅವನ ತಲೆಯ ಜುಟ್ಟನ್ನು ಹಿಡಿದು ಎಳೆದೊಯ್ಯುವೆವು
96:16نَاصِيَةٍ كَٰذِبَةٍ خَاطِئَةٍ
ಸುಳ್ಳುಗಾರ, ಪಾಪಿ ಹಣೆ ಅದು
96:17فَلۡيَدۡعُ نَادِيَهُۥ
ಅವನೀಗ ತನ್ನ ಕೂಟವನ್ನು ಕರೆಯಲಿ
96:18سَنَدۡعُ ٱلزَّبَانِيَةَ
ನಾವು ನಮ್ಮ ಪಡೆಯನ್ನು ಕರೆಯುವೆವು
96:19كـَلَّا لَا تُطِعۡهُ وَٱسۡجُدۡۤ وَٱقۡتَرِب
(ದೂತರೇ,) ಬೇಡ. ನೀವು ಅವನ ಆದೇಶವನ್ನು ಪಾಲಿಸಬೇಡಿ. ನೀವು ಸಾಷ್ಟಾಂಗವೆರಗಿರಿ ಮತ್ತು (ನಮಗೆ) ನಿಕಟರಾಗಿರಿ
Translation: Abdussalam Puthige.